ಸುಮನ್ ರಂಗನಾಥ್ ಭಾರತದ ಜನಪ್ರಿಯ ಚಲನಚಿತ್ರ ನಟಿ. ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು, ಬೆಂಗಾಳಿ ಮತ್ತು ಭೋಜಪುರಿ ಭಾಷೆಯ ಸುಮಾರು ೫೦ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀಧರ್ ಅಭಿನಯದ ಸಂತ ಶಿಶುನಾಳ ಶರೀಫ್ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಮನ್ ತದನಂತರದಲ್ಲಿ ವಿಷ್ಣುವರ್ಧನ್, ಮಿಥುನ್ ಚಕೃವರ್ತಿ, ಅಂಬರೀಶ್, ಶಂಕರ್ ನಾಗ್, ವಿನೋದ್ ಆಳ್ವ, ರಮೇಶ್ ಅರವಿಂದ್, ವಿಜಯಕಾಂತ್ ಮುಂತಾದ ಪ್ರಸಿದ್ಧ ನಟರೊಂದಿಗೆ ನಟಿಸಿದ್ದಾರೆ. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸುಮನ್ ಸಿದ್ಲಿಂಗು ಚಿತ್ರದ ಅಭಿನಯಕ್ಕಾಗೆ ಫಿಲ್ಮಫೇರ್ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. == ಸುಮನ್ ರಂಗನಾಥ್ ಅಭಿನಯದ ಚಿತ್ರಗಳು == == ಉಲ್ಲೇಖಗಳು == ಸುಮನ್ ರಂಗನಾಥ್ ಐ ಎಮ್ ಡಿ ಬಿನಲ್ಲಿ